ಆಯುರ್ವೇದದಲ್ಲಿ ಸೌಂದರ್ಯವರ್ಧಕ ತತ್ವ
—_———————-
1. ಗ್ರೈಂಡರ್ ನಲ್ಲಿ ಎರಡರಿಂದ ಮೂರರಷ್ಟು ಪಪ್ಪಾಯಿ ಹಣ್ಣಿನ ಚೂರುಗಳನ್ನು ಹಾಕಿ ಗ್ರೈಂಡ್ ಮಾಡಿ. ನಂತರ ಒಂದು ಬೌಲ್ ನಲ್ಲಿ ಹಾಕಿ ಕಡಲೆಹಿಟ್ಟು ಸೇರಿಸಿ. ಇದನ್ನು ಪೇಸ್ಟ್ ರೂಪದಲ್ಲಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಡಿ. ನಂತರ ಮುಖವನ್ನು ತೊಳೆದುಕೊಳ್ಳಿ. ಈ ರೀತಿ ವಾರಕ್ಕೆ ಎರಡು ಮೂರು ಸಲ ಮಾಡಿ.
2. ಒಂದು ಚಮಚ ಅರಸಿನ ,1 ಚಮಚ ಜೇನು, 2 ಚಮಚ ಹಾಲು -ಇವು ಮೂರನ್ನು ಬೌಲ್ ನಲ್ಲಿ ಹಾಕಿ ಪೇಸ್ಟ್ ಮಾಡಿ. ಬೆರಳಿನಿಂದ ಮುಖಕ್ಕೆ ಹಚ್ಚಿ 20 ನಿಮಿಷ ಬಿಡಿ. ನಂತರ ತೊಳೆಯಿರಿ. ದಿನನಿತ್ಯ ಮಾಡಿ.
3. ಅಡುಗೆಯಲ್ಲಿ ಪರಿಮಳಕ್ಕೆ ಬಳಸುವಂತಹ ಕುಂಕುಮಕೇಶರವನ್ನು ಎರಡರಿಂದ ಮೂರು ಎಳೆಗಳಷ್ಟು ತೆಗೆದುಕೊಂಡು ಒಂದು ಚಮಚ ಹಾಲನ್ನು ಸೇರಿಸಿ ಅರ್ಧ ಗಂಟೆ ನೆನೆಸಿ. ಹಾಲು ಕಿತ್ತಳೆ ಬಣ್ಣಕ್ಕೆ ತಿರುಗುವುದು. ಇದನ್ನು ಚೆನ್ನಾಗಿ ತಿರುವಿ ಮುಖಕ್ಕೆ ಲೇಪಿಸಬೇಕು. ಇಡೀ ರಾತ್ರಿ ಹಾಗೆಯೇ ಇರಲಿ. ಬೆಳಗ್ಗೆ ನೀರಿನಿಂದ ತೊಳೆಯಿರಿ. ಇದನ್ನು ಪ್ರತಿದಿನ ಮಾಡಿ.
4. ಒನ್ದು ಚಮಚದಷ್ಟು ಲೋಳೆಸರದ ಲೋಳೆಯನ್ನು ಅರ್ಧ ಚಮಚ ಸೌತೆ ರಸದೊಂದಿಗೆ ಮಿಶ್ರ ಮಾಡಿ ಪೇಸ್ಟು ರೂಪಕ್ಕೆ ಪರಿವರ್ತಿಸಿ. ಅದನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ರಾತ್ರಿ ಹಾಗೆಯೇ ಬಿಡಿ. ಬೆಳಗ್ಗೆ ತೊಳೆಯಿರಿ. ದಿನನಿತ್ಯ ಮಾಡಿ. ಅದಕ್ಕೆ ಅರ್ಧ ಚಮಚ ಕ್ಯಾರೆಟ್ ಜ್ಯೂಸ್ ಅಥವಾ ಪಾಪಾಯ ಜ್ಯೂಸ್ ಸೇರಿಸಬಹುದು.
5. ಸುಮಾರು 15ರಿಂದ 16ರಷ್ಟು ಮೂಲಿಕೆಗಳನ್ನು ಸೇರಿಸಿ ತಯಾರಿಸಿದ ಕುಂಕುಮಾದಿ ತೈಲ ವನ್ನು ಎರಡರಿಂದ ಮೂರು ಬಿಂದುಗಳ ಷ್ಟು ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ಆಯುರ್ವೇದದಲ್ಲಿ ಈ ಸಿದ್ಧೌಷಧ ವು ಮುಖದ ಸೌಂದರ್ಯ ವರ್ಧನೆಗೆ ಒಂದು ಪ್ರಸಿದ್ಧ ಪ್ರಯೋಗ.
6. ಮೊಡವೆ ಇತ್ಯಾದಿಗಳು ಇದ್ದ ಸಂದರ್ಭದಲ್ಲಿ 5 ಚಮಚದಷ್ಟು ಚಂದನ ಅಥವಾ ರಕ್ತಚಂದನವನ್ನು ಪೇಸ್ಟು ರೂಪಕ್ಕೆ ತಂದು 1 ಚಮಚ ಅರಸಿನ ಪುಡಿ ಸೇರಿಸಿ ಪುನಹ ಪೇಸ್ಟ್ ಮಾಡಬೇಕು. ನಂತರ ಎರಡು ಚಮಚ ಬಾದಾಮಿ ಎಣ್ಣೆ, 2 ಚಮಚ ತೆಂಗಿನಎಣ್ಣೆ ಸೇರಿಸಿಕೊಂಡು ಮಿಶ್ರ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ವಯಸ್ಸಾಗುವಿಕೆ ಯನ್ನುi ನಿಧಾನ ಗೊಳಿಸುವುದು.
ಈ ರೀತಿಯ ಸರಳ ವಿಧಾನಗಳು ಮುಖದ ಕಾಂತಿ ವರ್ಧನೆಗೆ ಸಹಕಾರಿ ಹಾಗೂ ವಯಸ್ಸಾಗುವಿಕೆ ಯನ್ನು ತಡೆಗಟ್ಟುವುದಕ್ಕೆ ಬಳಸಿಕೊಳ್ಳಬಹುದು.
ವ್ಯಾಯಾಮ ಇಲ್ಲದಿರುವುದು ಅಥವಾ ಅತಿಯಾದ ವ್ಯಾಯಾಮ, ನಿದ್ದೆಗೆಡುವುದು ಅಥವಾ ಅತಿಯಾದ ನಿದ್ರೆ, ಅತಿಯಾದ ಪ್ರಯಾಣ, ಅತಿ ಮೈಥುನ ಇತ್ಯಾದಿಗಳು ಆನೆಯನ್ನು ಸಿಂಹವು ಕಬಳಿಸುವಂತೆ
ಮನುಷ್ಯನನ್ನು ತೊಂದರೆಗೀಡುಮಾಡುವುದು.
ಡಾ ರಾಘವೇಂದ್ರ ಪ್ರಸಾದ್ ಬಂಗಾರಡ್ಕ
ಆಯುರ್ವೇದ ತಜ್ಞ ವೈದ್ಯರು
ಪ್ರಸಾದಿನೀ ಆಯುರ್ನಿಕೇತನ
ನರಿಮೊಗರು, ಪುತ್ತೂರು.
Mob. 9740545979
consult@prasadini.com
prasadinicare@gmail.com
www.prasadini.com